Home
ANY PROBLEM REGARDING WATER SUPPLY PLEASE CONTACT: SHETTY DEEPAK KRISHNA, JUNIOR ENGINEER.
Mobile: 9481814217. Ofice: 08223-273036
ನೀರಿನ ಸಂಬಂದಿತ ಯಾವುದೇ ಸಮಸ್ಯೆಗಳಿಗೆ ಸಂಪರ್ಕಿಸಿ ಶೆಟ್ಟಿ ದೀಪಕ್ ಕ್ರೃಷ್ಣ, ಕಿರಿಯ ಅಭಿಯಂತರರು, ದೂ: 9481814217, 08223-273036
ಪಿರಿಯಾಪಟ್ಟಣ ಪಟ್ಟಣ ಪಂಚಾಯಿತಿಯ ಬಗ್ಗೆ.
ಪಿರಿಯಾಪಟ್ಟಣ ಸ್ಥಳೀಯ ಸಂಸ್ಥೆಯು 1996 ರಲ್ಲಿ ಪಟ್ಟಣ ಪಂಚಾಯಿತಿಯಾಯಿತು. ಪಟ್ಟಣದ ಜನಸಂಖ್ಯೆ 2011 ರ ಜನಗಣತಿಯಂತೆ 16077, ನಗರದಲ್ಲಿ 15 ವಾರ್ಡ್ ಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಲಿರುತ್ತಾರೆ ಹಾಗೂ 3 ಜನ ನಾಮನಿರ್ದೇಶನ ಸದಸ್ಯರಿರುತ್ತಾರೆ. ಪಟ್ಟಣವು 6.26 ಚ.ಕಿ.ಮೀ ವ್ಯಾಪಿಸಿದೆ. ಈ ಪಟ್ಟಣವು ಮೈಸೂರು-ಮಂಗಳೂರು ಹೆದ್ದಾರಿಯಲ್ಲಿದ್ದು, ಮೈಸೂರಿನಿಂದ 70 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ಚಂಗಲ್ವ ರಾಜರ ಕೇಂದ್ರಸ್ಥಾನವಾಗಿದ್ದು, 1578 ರಲ್ಲಿ ಪೆರಿಯ ಎಂಬ ರಾಜನು ಈ ಪಟ್ಟಣದಲ್ಲಿದ್ದ ಮಣ್ಣಿನ ಕೋಟೆಯನ್ನು ಕಲ್ಲಿನ ಕೋಟೆಯನ್ನಾಗಿ ಪರಿವರ್ತಿಸಿದನು,ಆದ ಕಾರಣ ಈ ಪಟ್ಟಣಕ್ಕೆ ಪೆರಿಯಾಪಟ್ಟಣ ಎಂಬ ಹೆಸರು ಬಂತು. ಈ ಪಟ್ಟಣದಲ್ಲಿ Match Stick Factory and Tobacco Curing Unit ಇರುತ್ತವೆ. ಈ ಪಟ್ಟಣ ಜನತೆಯು ಜೀವನೋಪಾಯಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿರುತ್ತಾರೆ. ತಂಬಾಕು ಈ ಪಟ್ಟಣದ ಪ್ರಮುಖ ವಾಣಿಜ್ಯ ಬೆಳೆ, ತಂಬಾಕಲ್ಲದೆ ಮೆಕ್ಕೆಜೋಳ, ತೆಂಗು, ಬಾಳೆ, ಅಡಿಕೆ ಮತ್ತು ಮೆಣಸು ಇತರೆ ಪ್ರಮುಖ ಬೆಳೆಗಳು.
BRIEF ABOUT PERIYAPATNA TP.
The Town Panchayath (TP), Periyapatna was Constituted in 1996, the town is situated on Mysore-Mangalore highway at a distance of 70 km from Mysore. It has a population of 16077 as per census 2011 and the tp has 15 wards and equal number of Counicilors and 3 numbers of Nominee Councilors. Periyapatna Tp stretches to an area of 6.26 Sq.Kms. It was the headquarters of the "Changalva Kings". Periya Raja of this line replaced the mud fort with stone in 1578 A.D and establishes the town which was named after him. Tobacco is a major crop in this taluk. There is a Match Stick Factory and Tobacco Curing Unit in the town. People here primarily depend on Farming and Land for their livelihood. The Chief crops grown here otherthan Tobacco are Areca nut, Coconut, Plantains, Betel Leaf and Pepper.
ಗಣಕೀಕರಣ:
ಪಟ್ಟಣ ಪಂಚಾಯಿತಿಯು 1990ರಿಂದ ಈ ದಿನಗಳವರೆಗೆ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೇ ಜನನ-ಮರಣ ನೋಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದು.ಹಾಗೂ ಸಾರ್ವಜನಿಕ ಕುಂದುಕೊರತೆ ಮತ್ತು ನಿವಾರಣಾ ಕೇಂದ್ರವನ್ನು ತೆರೆದಿದ್ದು,ಸಾರ್ವನಿಕರಿಂದ ಬರುವ ದೂರುಗಳನ್ನು ಆನ್ಲೈನ್ ಅಪ್ಲಿಕೇಷನ್ ನಲ್ಲಿ ದಾಖಲು ಮಾಡಲಾಗುತ್ತಿದೆ.ಮತ್ತು ಪಟ್ಟಣದ ಕುಂದು ಕೊರತೆಗಳ ಬಗ್ಗೆ ಸಾರ್ವಜನಿಕರು ದೂರವಾಣಿ ಮೂಲಕ ತಮ್ಮ ದೂರುಗಳನ್ನು ನೊಂದಾಯಿಸಬಹುದು ಮತ್ತು ದೂರುಗಳ ವಿವರವನ್ನು ಪಡೆಯಬಹುದು. ದೂರವಾಣಿ ಸಂಖ್ಯೆ: 08223-273150.
COMPUTARIZATION.
We are very happy to intimate the citizens of Periyapatna city that we have computerizes the Birth and Death records from 1990 to till date under state Government KMRP computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility. Public Grievances and Redressal Cell Opened and Complaints which received from publics are registering in Online.
ಘನತ್ಯಾಜ್ಯ ವಸ್ತು ಸಂಗ್ರಹಣೆ.
ಪಟ್ಟಣ ಪಂಚಾಯಿತಿಯ ವಾರ್ಡುಗಳ ಘನತ್ಯಾಜ್ಯ ವಸ್ತು ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಇದರಲ್ಲಿ ಪ್ರಾಥಮಿಕ ಸಂಗ್ರಹಣೆ, ಬೀದಿಗುಡಿಸುವುದು ಮತ್ತು ಸಾಗಾಣಿಕೆ ಸೇರಿಕೊಂಡಿರುತ್ತದೆ.ಹಾಗೂ ಪಟ್ಟಣದ 5ವಾರ್ಡುಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ.ಇದಕ್ಕೆ ಸಂಬಂದಪಟ್ಟ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಸಂಖ್ಯೆ: 08223-273150 ಕರೆಮಾಡಿ ದೂರು ನೊಂದಾಯಿಸುವುದರೊಂದಿಗೆ ಪಟ್ಟಣವನ್ನು ಸ್ವಚ್ಚವಾಗಿಡಲು ಸಹಕರಿಸಿ.
SOLID WASTE MANAGEMENT.
Solid Waste Management is done by Town Panchayat. It is of two package system comprising primary collection, street sweeping and transportation to landfill site. Door-to-Door collections are done in 8 Wards. Citizens have to pay user charges as per the MSW-rules for door-to-door collections. If you have any complaints concerning to solid waste management please call our helpline no: 08227-260440. Help us to keep your city clean and hygienic
ನಗರ ಸ್ಥಳೀಯ ಸಂಸ್ಥೆಗಳ ಧ್ಯೇಯೋದ್ಧೇಶಗಳು.
ಇಂದು ನಗರ ಜೀವನ ವ್ಯವಸ್ಥೆಯು ಸಮಪðಕವಾಗಿರಲು ಸಕಾðರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈಗ ಪುರಸಭೆಯ ಮುಖಾಂತರ ಈ ಕೆಳಕಂಡ ಕತðವ್ಯಗಳನ್ನು ನಿವðಹಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿವðಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿವðಹಣಾ ಕೌಶಲ್ಯಗಳು ವೃದ್ದಿಗೊಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾಯðಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೆಕು. ಹಣಕಾಸು ನಿವðಹಣೆಯಲ್ಲಿ ಮತ್ತು ಇತರೆ ಕಾಯð ನಿವðಹಣೆಯಲ್ಲಿ ಪಾರದಶðಕತೆ ಇರಬೇಕು.
· ಪಟ್ಟಣ, ನಗರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
· ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
· ಆಥಿðಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
· ರಸ್ತೆಗಳು ಮತ್ತು ಸೇತುವೆಗಳನ್ನು ನಿಮಿðಸುವುದು.
· ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು.
· ಜನರ ಆರೋಗ್ಯ, ನೈಮðಲ್ಯ ಕಾಪಾಡುವುದು.
· ಸಮಾಜದ ದುಬðಲ ವಗðಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
· ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
· ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ನಗರದ ಬಡತನ ನಿವಾರಣೆ.
· ಬೀದಿದೀಪ, ಬಸ್ ನಿಲ್ದಾಣ, ಸಾವðಜನಿಕ ಶೌಚಾಲಯಗಳಂಥ ಮೂಲಸೌಕಯðಗಳನ್ನು ಒದಗಿಸುವುದು.
· ಶ್ಮಶಾನ ಮತ್ತು ಶ್ಮಶಾನಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕಯðಗಳನ್ನು ಒದಗಿಸುವುದು.
· ಜನನ-ಮರಣ ನೊಂದಣಿಯೂ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
· ಕಸಾಯಿಖಾನೆಗಳ ನಿಯಂತ್ರಣ.
· ಸಕಾðರದ ಮಂಜೂರಾತಿಗೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ,ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ.
· ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
· ರಸ್ತೆ, ಬೀದಿಗಳ ದುರಸ್ತಿ ಮತ್ತು ನಿವðಹಣೆ.
· ಅಪಾಯಕಾರಿ ರೋಗಗಳ ನಿಯಂತ್ರಣೆ.
ಇವುಗಳು ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾವðಜನಿಕ ಸೌಲಭ್ಯ ರಚನೆ ಮತ್ತು ನಿವðಹಣೆಯಲ್ಲಿ ಸದಾ ತೊಡಗಿರುತ್ತದೆ.
This page is Maintained By: Smt. Pankaja.V, Cheif Officer
Updated on: 12 June 2012

